ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / "ಸರ್ವಾಂಗೀಣ ಪ್ರಗತಿಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಿಕೆ ಅಗತ್ಯ" ರಾಮ ಪ್ರಸನ್ನ ಖಾರ್ವಿ ಅಭಿಮತ

"ಸರ್ವಾಂಗೀಣ ಪ್ರಗತಿಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಿಕೆ ಅಗತ್ಯ" ರಾಮ ಪ್ರಸನ್ನ ಖಾರ್ವಿ ಅಭಿಮತ

Sun, 02 Jul 2023 04:48:46  Office Staff   SOnews

 

ಭಟ್ಕಳ : ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಉತ್ತರ ಕನ್ನಡ ಜಿಲ್ಲಾ ಅಂತರ ಪದವಿ ಕಾಲೇಜು ಮಟ್ಟದ ಶೈಕ್ಷಣಿಕ & ಸಾಂಸ್ಕೃತಿಕ ಸ್ಪರ್ಧೆ (ಫೆಸ್ಟ್) ಸೃಷ್ಟಿ ೨೦೨೩ ಅತ್ಯಂತ ವಿಜೃಂಭಣೆಯಿಂದ ಜರುಗಿತು. 

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುಮಟಾದ ಯುವ ಉದ್ಯಮಿ ರಾಮ ಪ್ರಸನ್ನ ಖಾರ್ವಿ, ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಿಕೆ ಅಗತ್ಯ ಎಂದರು.

ಮುಖ್ಯ ಅತಿಥಿ ಮಹಿಳಾ ಉದ್ಯಮಿ ಸುಮಿತ್ರಾ ಕೌಶಿಕ ಮಾತನಾಡಿ "ಸರ್ವ ಕ್ಷೇತ್ರದಲ್ಲಿ ಭಾಗವಹಿಸುವಿಕೆಯಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿ, ವಿದ್ಯಾರ್ಥಿಗಳು ಹೆಚ್ಚಿನ ಶಿಕ್ಷಣ ಪಡೆದು ಕೌಶಲ್ಯವಂತರಾಗಬೇಕೆಂದು" ಹೇಳಿದರು.

ಹಾಂಗ್ಯೋ ಐಸ್ ಕ್ರಿಮ್ಸ್'ನ ಎಂ.ಡಿ, ಭಟ್ಕಳ ಎಜ್ಯುಕೇಶನ್ ಟ್ರಸ್ಟ್'ನ ಟ್ರಸ್ಟಿ ಪ್ರದೀಪ ಪೈ ಮಾತನಾಡಿ "ಶ್ರೀ ಗುರು ಸುಧೀಂದ್ರ ಕಾಲೇಜು ಕಳೆದ ಹತ್ತು ವರ್ಷದಲ್ಲಿ ವಿಶ್ವವಿದ್ಯಾಲಯದ ಒಂಬತ್ತು ರ‍್ಯಾಂಕ್ ಗಳಿಸಿದನ್ನು ಶ್ಲಾಘಿಸಿ, ಶುಭ ಹಾರೈಸಿದರು". 

ಅಧ್ಯಕ್ಷತೆ ವಹಿಸಿದ್ದ ಭಟ್ಕಳ ಎಜ್ಯುಕೇಶನ್ ಟ್ರಸ್ಟ್'ನ ಅಧ್ಯಕ್ಷ ಡಾ. ಸುರೇಶ ನಾಯಕ ಮಾತನಾಡಿ "ಇಂತಹ ಅವಕಾಶಗಳನ್ನು ಬಳಸಿಕೊಳ್ಳುವ ಮೂಲಕ,  ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು" ಎಂದು ಕಿವಿಮಾತು ಹೇಳಿದರು.

ಭಟ್ಕಳ ಎಜ್ಯುಕೇಶನ್ ಟ್ರಸ್ಟ್'ನ ಟ್ರಸ್ಟಿ ಮ್ಯಾನೇಜರ ರಾಜೇಶ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು.  ಶ್ರೀ ಗುರು ಸುಧೀಂದ್ರ ಕಾಲೇಜಿನ ಪ್ರಾಂಶುಪಾಲ ಶ್ರೀನಾಥ್ ಪೈ ಸ್ವಾಗತಿಸಿದರು. ಬಿ.ಕಾಂ ವಿಭಾಗದ ಉಪಪ್ರಾಂಶುಪಾಲ ಪಿ.ಎಸ್ ಹೆಬ್ಬಾರ ವಂದಿಸಿದರು. ಉಪನ್ಯಾಸಕಿ ದೀಪಾ ಹಾಗೂ ನಿಶಾ ನಿರೂಪಿಸಿದರು. 

ಈ ಸಂದರ್ಭದಲ್ಲಿ ಮಣಿಪಾಲ್‌ನ ಆನ್‌ಲೈನ್ ಎಂ.ಸಿ.ಎ, ಎಂ.ಬಿ.ಎ ಕೋರ್ಸುಗಳಿಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು ಹಾಗೂ ಆನ್‌ಲೈನ್ ಮಣಿಪಾಲ್‌ನ ಅಸಿಸ್ಟಂಟ್ ಮ್ಯಾನೇಜರ್ ಸೈಯದ್ ಅಹಮದ್ ಈ ವಿನೂತನ ಕೋರ್ಸುಗಳ ಬಗ್ಗೆ ಮಾಹಿತಿ ನೀಡಿದರು. 

ಉತ್ತರ ಕನ್ನಡ ಜಿಲ್ಲೆಯ ನೂರಾರು ವಿದ್ಯಾರ್ಥಿಗಳು ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಸೃಷ್ಟಿ ೨೦೨೩ರ ವೀರಾಗೃಣಿಯಾಗಿ ಹೊನ್ನಾವರದ ಎಸ್.ಡಿ.ಎಂ ಕಾಲೇಜು ಹಾಗೂ ರನ್ನರ್‌ಅಪ್ ಸ್ಥಾನವನ್ನು ಶ್ರೀ ಗುರು ಸುಧೀಂದ್ರ ಕಾಲೇಜಿನ ಬಿ.ಕಾಂ ವಿಭಾಗ ಪಡೆದುಕೊಂಡಿತು.
 


Share: